ಬೆನೆಡಿಕ್ಟ್ ರೂತ್‍ಫುಲ್ಟನ್
1887-1948. ಅಮೆರಿಕಯ ಮಾನವ ಶಾಸ್ತ್ರಜ್ಞೆ. ನ್ಯೂಯಾರ್ಕ್‍ನಲ್ಲಿ ಜನನ. ವಾಸ್ಸೆರ್ ಕಾಲೇಜು ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ. 1923ರಲ್ಲಿ ಅದೇ ವಿಶ್ವವಿದ್ಯಾಲಯದಲ್ಲಿ ಮಾನವ ಶಾಸ್ತ್ರದ ಅಧ್ಯಾಪಿಕೆಯಾಗಿ ನೇಮಕಗೊಂಡು ಪ್ರಾಧ್ಯಾಪಿಕೆಯೂ ಆದಳು. ಬರೆದದು ಕಡಿಮೆ. ಪ್ಯಾಟರ್ನ್ ಆಫ್ ಕಲ್ಚರ್ (1934) ರೇಸ್; ಸೈನ್ಸ್ ಆಂಡ್ ಪಾಲಿಟಿಕ್ಸ್ (1940) ಈಕೆ ಬರೆದ ಪುಸ್ತಕಗಳು. ಮೊದಲ ಪುಸ್ತಕ ಈಕೆಯ ವಿಚಾರ ಸ್ವೋಪಜ್ಞತೆಯನ್ನೂ ವಿದ್ವತ್ತನ್ನೂ ಪ್ರಕಟಗೊಳಿಸಿತು. ಸಂಸ್ಕøತಿಯ ವಿಕಾಸ ಕುರಿತ ಈಕೆಯ ವಿಚಾರಸರಣಿ, ವಿಶ್ಲೇಷಣೆಗಳಿಗೆ ಸ್ವಂತ ಚಿಂತನೆಯ ಛಾಪು ಉಂಟು. 
(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ